ದಾವಣಗೆರೆ, ಮಾ.7- ಹೊಸ ಕುಂದುವಾಡ ಯೂತ್ ಮತ್ತು ಡೈಮಂಡ್ ಗ್ರೂಪ್ ವತಿಯಿಂದ ಪ್ರಪ್ರಥಮ ಬಾರಿಗೆ ಹೊಸ ಕುಂದುವಾಡ ಆಂಜನೇಯ ದೇವಸ್ಥಾನದ ಪಕ್ಕದ ಬಯಲಿನಲ್ಲಿ ನಾಳೆ ದಿನಾಂಕ 8 ರಂದು ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರೂಪ್ ಅಧ್ಯಕ್ಷ ಸಚಿನ್ ಎಸ್. ದೊಡ್ಡಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್, ಶ್ರೀನಿವಾಸ ದಾಸಕರಿಯಪ್ಪ, ಶಾಮನೂರು ಪ್ರವೀಣ್, ಬಿ.ಜಿ. ಅಜಯ್ ಕುಮಾರ್, ವಿನಾಯಕ ಪೈಲ್ವಾನ್, ಜೆ.ಎನ್. ಶ್ರೀನಿವಾಸ್ ಮತ್ತಿತರರು ಆಗಮಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಜಯ್, ಸಿ.ಓಬಳೇಶ್,ರವಿಕುಮಾರ್, ಎಂ.ಋತಿಕ್, ಟಿ.ಮಾರುತಿ ಉಪಸ್ಥಿತರಿದ್ದರು.