ನಗರದಲ್ಲಿ ಇಂದು ಶ್ರೀ ಶನೈಶ್ವರ ಸ್ವಾಮಿ ಮಹಾಯಾಗ, ಮಹಾಚಂಡಿಕಾ ಯಾಗ

ಹದಡಿ ರಸ್ತೆಯಲ್ಲಿರುವ ಶ್ರೀ ಕ್ಷೇತ್ರ ನವಸ್ಥಾನ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಕೊಪ್ಪದಾಂಬ ಸೇವಾ ಟ್ರಸ್ಟ್‌ನಿಂದ 30ನೇ ವರ್ಷದ ವಾರ್ಷಿಕೋತ್ಸವ ಶ್ರೀ ಶನೇಶ್ವರ ಸ್ವಾಮಿ ಮಹಾಯಾಗ ಹಾಗೂ ಶ್ರೀ ಮಹಾಚಂಡಿಕಾ ಯಾಗವು ಇಂದು ಬೆಳಗ್ಗೆ 7.30ಕ್ಕೆ ನಡೆಯಲಿದೆ. 

ಗಂಗೆಪೂಜೆ, ವೀರಗಾಸೆ ಸಮೇತರಾಗಿ ಯಾಗಾಶಾಲಾ ಪ್ರವೇಶ, ಬಲಿ, ಗಣಪತಿ ಪೂಜೆ, ಪುಣ್ಯಾಹ ದೇವನಾಂದಿ, ಪಂಚಗವ್ಯ, ಪರಿವಾರ ಕಳಸ ಸ್ಥಾಪನೆ ಶ್ರೀ ಶನೈಶ್ವರ ಶ್ರೀ ಮಹಾ ಮೃತ್ಯುಂಜಯ ಕಳಸ ಸ್ಥಾಪನೆ, ಆದಿತ್ಯಾದಿ ನವಗ್ರಹ ಮತ್ತು ಶ್ರೀ ಶನೇಶ್ವರ ಮಹಾ ಯಾಗವನ್ನು ನೆರವೇರಿಸಲಾಗುತ್ತದೆ.

ನಾಳೆ ಭಾನುವಾರ ಬೆಳಿಗ್ಗೆ 7 ರಿಂದ ಪ್ರಾರಂಭೋತ್ಸವ ಮಧ್ಯಾಹ್ನ 1ಕ್ಕೆ ಪೂರ್ಣಾಹುತಿ ನಂತರ ಅನ್ನ ಸಂತರ್ಪಣೆ ಇರುತ್ತದೆ. ಮಹಾ ಚಂಡಿಕಾ ಯಾಗ ಹಾಗೂ ಜಿಯಾದಿ ಹೋಮ ಪೂರ್ಣಾಹುತಿ ನೆರವೇರಲಿದೆ.

error: Content is protected !!