ತರಳಬಾಳು ಬಡಾವಣೆಯ ಶಿವಕುಮಾರಸ್ವಾಮಿ ಮಹಾಮಂಟಪದ ಶಿವಗೋಷ್ಠಿ ಸಮಿತಿ, ಸಾದರ ನೌಕರರ ಬಳಗದ ಸಂಯುಕ್ತಾಶ್ರಯದಲ್ಲಿ ಇಂದು ಸಂಜೆ 6.30 ಕ್ಕೆ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ `ಶಿವಗೋಷ್ಠಿ-316 ಹಾಗೂ ಸ್ಮರಣೆ- 91 ‘ ಕಾರ್ಯಕ್ರಮ ನಡೆಯಲಿದೆ.
ಮಾಗನೂರು ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸುವರು. `ಸ್ತ್ರೀ ಸಮಾನತೆ ಮತ್ತು ವಚನಕಾರರು’ ಕುರಿತು ಹರಿಹರದ ಶಿಕ್ಷಕರಾದ ಎಂ.ಟಿ. ಮಮತಾ ಉಪನ್ಯಾಸ ನೀಡಲಿದ್ದಾರೆ.
ಡಾ. ಸೋಮಶೇಖರಗೌಡ್ರು ಅವರ ಸ್ಮರಣೆಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾಡಲಿದ್ದು, ಇದೇ ವೇಳೆ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಎಂ.ಬಿ. ಬಸವನಗೌಡ್ರು ಅವರನ್ನು ಅಭಿನಂದಿಸಲಾಗುವುದು. ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.