ದೇವರಹಟ್ಟಿ : ಇಂದು ರಥೋತ್ಸವ

ದಾವಣಗೆರೆ  ಸಮೀಪದ ಶ್ರೀ ದೇವರಹಟ್ಟಿ ಬಸವ ಣ್ಣನ ರಥೋತ್ಸವವು ಇಂದು ಸಂಜೆ 6.30 ಗಂಟೆಗೆ ನೆರವೇರಲಿದೆ. ನಾಳೆ  ಗುರುವಾರ ಸಂಜೆ 4 ಕ್ಕೆ ಬೆಲ್ಲದ ಬಂಡಿ ಮತ್ತು ಹೋರಿ ಗಳ ಮೆರವಣಿಗೆ ಜಾತ್ರೆ, ಸಂಜೆ 7.30ಕ್ಕೆ ಬಸವಣ್ಣನ ಓಕಳಿ, ಗಂಗಾ ಪೂಜೆ ಕಾರ್ಯಕ್ರಮದ ನಂತರ ದೇವರ ಗುಡಿ ತುಂಬುವುದು. ನಾಡಿದ್ದು ದಿನಾಂಕ 7ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಪಲ್ಲಕ್ಕಿ ಸೇವೆ ನಡೆಯಲಿದೆ.

error: Content is protected !!