ಉಕ್ಕಡಗಾತ್ರಿ : ಇಂದು ಆರೋಗ್ಯ ಮೇಳ

ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು 10 ರಿಂದ ಮಧ್ಯಾಹ್ನ 3 ರವರೆಗೆ ದಾವಣಗೆರೆಯ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಜೆಜೆಎಂ ಮಡಿಕಲ್ ಕಾಲೇಜು ಹಾಗೂ ಬಾಪೂಜಿ ಆಸ್ಪತ್ರೆ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಇವರ ಸಹಯೋಗದೊಂದಿಗೆ 70 ತಜ್ಞ ವೈದ್ಯರ ತಂಡದಿಂದ ಬೃಹತ್ ಉಚಿತ ಆರೋಗ್ಯ ಮೇಳವನ್ನು ಏರ್ಪಡಿಸಲಾಗಿದೆ. 

ಈ ಆರೋಗ್ಯ ಮೇಳವನ್ನು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಉದ್ಘಾಟಿಸಲಿದ್ದಾರೆಂದು ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಮತ್ತು ಟ್ರಸ್ಟಿ ಜಿಗಳಿ ಇಂದೂಧರ್ ತಿಳಿಸಿದ್ದಾರೆ.

error: Content is protected !!