ನಗರದಲ್ಲಿ ಇಂದು ಸದ್ಯೋಜಾತ ಶ್ರೀಗಳ 17ನೇ ವರ್ಷದ ಸಂಸ್ಮರಣೋತ್ಸವ

ಡಾ. ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 17ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಶ್ರೀ ಡಾ. ಸದ್ಯೋಜಾತ ಮಠದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಎಸ್. ಎಸ್ ಗಣೇಶ್,  ಲೆಕ್ಕಪರಿಶೋಧಕ ಡಾ. ಅಥಣಿ ಎಸ್. ವೀರಣ್ಣ, ಜವಳಿ ವರ್ತಕ ಬಿ.ಸಿ ಉಮಾಪತಿ,  ಕೈಗಾರಿಕೋದ್ಯಮಿ ಐ.ಪಿ ಮಲ್ಲೋಕಾರಾಧ್ಯ ಆಗಮಿಸುವರು.   ‘ಜನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯಗಳು’ ವಿಷಯ ಕುರಿತು ಜನಪದಶ್ರೀ ಅಪ್ಪಗೆರೆ ತಿಮ್ಮರಾಜು ಉಪನ್ಯಾಸ ನೀಡಲಿದ್ದಾರೆ.

error: Content is protected !!