ದಾವಣಗೆರೆ, ಮಾ. 1 – ಚಂದ್ರದರ್ಶನದೊಂದಿಗೆ ಪ್ರಾರಂಭವಾಗಿರುವ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ತಿಂಗಳು ಉಪವಾಸ (ರೋಜಾ) ಆಚರಣೆ ಆರಂಭಗೊಂಡಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಲ್ಲಿ ಮುಸ್ಲಿಂ ಬಾಂಧವರು ಮನವಿ ಮಾಡಿದ್ದಾರೆ
ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಬಾಂಧವರು ಉಪವಾಸ, ಪ್ರಾರ್ಥನೆಯಲ್ಲಿ ಮಗ್ನರಾಗಿರುತ್ತಾರೆ. ನಿಗದಿತ ಸಮಯಕ್ಕೆ ಕುಡಿಯುವ ನೀರು, ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಗಾಗ ಈ ಭಾಗದಲ್ಲಿ ವಿದ್ಯುತ್ ಅಡಚಣೆಯಾಗುತ್ತಿದ್ದು, (ಲೋಡ್ ಶೆಡ್ಡಿಂಗ್) ಇದೇ ರೀತಿ ಮುಂದುವರೆದರೆ ರಾತ್ರಿ ಸಮಯದಲ್ಲಿ ಅಡುಗೆ ಹಾಗೂ ಸಹೇರಿ ಮಾಡಲು ತುಂಬಾ ತೊಂದರೆಯಾಗುತ್ತದೆ ಎಂದು ವಿವರಿಸಿದರು.
ಉಪವಾಸದೊಂದಿಗೆ ದಿನದ ಐದು ಹೊತ್ತು ಪ್ರಾರ್ಥನೆಯನ್ನು ಸಲ್ಲಿಸಿ ಸಂಜೆ ಇಫ್ತಾರ್ ಸಮಯದಲ್ಲಿ ವಿದ್ಯುತ್ ಅಡಚಣೆಯಾಗದಂತೆ ರಂಜಾನ್ ತಿಂಗಳ ಅಂತ್ಯದವರೆಗೂ ಮೂಲ ಸೌಕರ್ಯ ಒದಗಿಸಲು ಕೋರಿದ್ದಾರೆ.