ಕೈದಾಳೆ ಗ್ರಾಮದಲ್ಲಿ ನಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

ದಾವಣಗೆರೆ  ತಾಲ್ಲೂಕಿನ ಕೈದಾಳೆ ಗ್ರಾಮದ ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾ ರಥೋತ್ಸವವು ನಾಳೆ ಮಂಗಳವಾರ ನೆರವೇರಲಿದೆ.

ಇಂದು ಬೆಳಿಗ್ಗೆ 7-30 ರಿಂದ ಗಜ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ ನಡೆಯಲಿದೆ. ರಾತ್ರಿ 10-30ಕ್ಕೆ ರಥದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವಿದ್ದು, ರಾತ್ರಿ 11 ಗಂಟೆಗೆ ರಥಕ್ಕೆ ಅರಿಶಿಣ ಎಣ್ಣೆ ಧಾರಣೆ ಮಾಡಲಾಗುವುದು. 

ನಾಳೆ ಮಂಗಳವಾರ ಬೆಳಿಗ್ಗೆ 7.45 ರಿಂದ 8.15 ರ ವರೆಗೆ ಮಹಾರಥೋತ್ಸವವನ್ನು ನೆರವೇರಿಸಲಾಗುವುದು. ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ ಜವಳ ಕಾರ್ಯಕ್ರಮ ನಡೆಯಲಿದೆ.

error: Content is protected !!