ಮಲೇಬೆನ್ನೂರು, ಫೆ. 28 – ಕೊಮಾರನಹಳ್ಳಿಯ ಶ್ರೀ ರಂಗನಾಥ ಆಶ್ರಮದಲ್ಲಿ ಶ್ರೀ ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸರ 72ನೇ ವರ್ಷದ ಆರಾಧನಾ ಮಹೋತ್ಸವವು ಈಗಾಗಲೇ ಆರಂಭವಾಗಿದ್ದು, ಮಾರ್ಚ್ 2ರ ಭಾನುವಾರದವರೆಗೂ ನಡೆಯಲಿದೆ.
ಪ್ರತಿ ನಿತ್ಯ ಬೆಳಿಗ್ಗೆ 7.30ರಿಂದ ಶ್ರೀ ಗುರು ಚರಿತ್ರೆ ಪಾರಾಯಣ, ಅಭಿಷೇಕ ಕುಂಕುಮಾರ್ಚನೆ, ಪ್ರತಿದಿನ ಸಂಜೆ 6 ಕ್ಕೆ ಶ್ರೀಗಳವರ ಜೀವನ ಚರಿತ್ರೆ ಉಪನ್ಯಾಸ ಮತ್ತು ವಿದ್ವಾಂಸರಿಂದ ಭಾರತ ವಾಚನ ನಡೆಯುತ್ತಿವೆ. ನಾಳೆ ಶನಿವಾರ ನಿತ್ಯ ಕಾರ್ಯಕ್ರಮದಲ್ಲಿ ಶ್ರೀ ಗುರು ಭಿಕ್ಷೆ ನಡೆಯಲಿದ್ದು, ನಾಡಿದ್ದು ದಿನಾಂಕ 2ರ ಭಾನುವಾರ ಶ್ರೀಗಳವರ ಆರಾಧನಾ ಕಾರ್ಯಕ್ರಮ ನಡೆಯಲಿದೆ.