ದಾವಣಗೆರೆ, ಫೆ.27- ನಗರದ ಶ್ರೀ ಶಾರದ ಸಂಗೀತ ಮತ್ತು ನೃತ್ಯ ಕಲಾ ಶಾಲೆ ವತಿಯಿಂದ ನೃತ್ಯ ಕ್ಷೇತ್ರದ ಮಹಾನ್ ಚೇತನ ಕೀರ್ತಿಶೇಷರಾದ ರುಕ್ಮಿಣಿ ದೇವಿ ಅರುಂಡೇಲ್ ಅವರ ಸ್ಮರಣಾರ್ಥ ನೃತ್ಯ ಸಮರ್ಪಣಾ – 2025 (ಭರತ ನಾಟ್ಯ ಕಾರ್ಯಕ್ರಮ) ವು ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನಾಡಿದ್ದು ದಿನಾಂಕ 1ರ ಭಾನುವಾರ ಸಂಜೆ 5 ಗಂಟೆಗೆ ನಡೆಯಲಿದೆ.
ಶ್ರೀ ಶಾರದ ಸಂಗೀತ ಮತ್ತು ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಸಮರ್ಪಣಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಭರತ ನಾಟ್ಯ ವಿದ್ತತ್ ಅಂತಿಮ ವಿಭಾಗದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿರುವ ಕು. ಬಿ. ಜ್ಯೋತಿ, ಭರತ ನಾಟ್ಯ ವಿಧ್ವತ್ ಪೂರ್ವ ವಿಭಾಗದದಲ್ಲಿ ಉನ್ನತ ವಿಭಾಗದಲ್ಲಿ ತೇರ್ಗಡೆಯಾದ ಕು. ಟಿ. ತನುಶ್ರೀ, ಭರತ ನಾಟ್ಯ ಸೀನಿಯರ್ ವಿಭಾಗದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿರುವ ಕು. ಧನ್ಯ ನಾಗೇಶ್, ಭರತ ನಾಟ್ಯ ಜ್ಯೂನಿಯರ್ ವಿಭಾಗದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾದ ಕು. ವಿ.ಎಸ್. ಚೈತನ್ಯ ಅವರುಗಳನ್ನು ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಗುವುದು.