ನಗರದ ಲೇಬರ್ ಕಾಲೋನಿಯಲ್ಲಿ ಇಂದಿನಿಂದ ಶಿವರಾತ್ರಿ ಜಾಗರಣೆ

ಲೇಬರ್ ಕಾಲೋನಿ 6ನೇ ತಿರುವಿನಲ್ಲಿರುವ (ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ರಸ್ತೆ) ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಬರುವ ಮಾರ್ಚ್ 4ರ ವರೆಗೆ ದೇವಸ್ಥಾನದಲ್ಲಿ 57ನೇ ವರ್ಷದ ಶಿವರಾತ್ರಿ ಜಾಗರಣೆ ಮಹೋತ್ಸವ ನಡೆಯಲಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ಮಹಾರುದ್ರಾಭಿಷೇಕ ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮದೊಂದಿಗೆ ಜಾಗರಣೆ ನಡೆಯಲಿದೆ. ನಾಳೆ ಶನಿವಾರ ಬೆಳಗ್ಗೆ 8 ಗಂಟೆಗೆ ಮಹಾಪೂಜೆ ನಂತರ ವಾದ್ಯ ವೈಭವಗಳೊಂದಿಗೆ ಸ್ವಾಮಿಯ ಮೆರವಣಿಗೆ ಹಾಗೂ ಮಧ್ಯಾಹ್ನ ಪ್ರಸಾದ ವಿನಿಯೋಗ ನಡೆಯಲಿದೆ.

ನಾಡಿದ್ದು ಭಾನುವಾರ 8 ಗಂಟೆೆಗೆ ಸ್ವಾಮಿಗೆ ಪೂಜೆ ಪಳಾರ ಹಾಕಿಸುವುದು. 4ರಂದು ಸಂಜೆ ಪೂಜೆ ನಡೆಯಲಿದ್ದು, ನಂತರ ಪಳಾರ ವಿತರಣೆ ನಡೆಯಲಿದೆ.

error: Content is protected !!