ದಾವಣಗೆರೆ, ಫೆ.28- ತಾಲ್ಲೂಕಿನ ಕೈದಾಳೆ ಗ್ರಾಮದ ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾ ರಥೋತ್ಸವವು ಮಾರ್ಚ್ 4 ರಂದು ನೆರವೇರಲಿದೆ.
ಮಾ.2 ರಂದು ಸಂಜೆ 6-30 ರಿಂದ ಗೋಧೂಳಿ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ ನೆರವೇರಲಿದ್ದು, ಮಾ.3 ರಂದು ಬೆಳಿಗ್ಗೆ 7-30 ರಿಂದ ಗಜ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ ನಡೆಯಲಿದೆ. ರಾತ್ರಿ 10-30ಕ್ಕೆ ರಥದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವಿದ್ದು, ರಾತ್ರಿ 11 ಗಂಟೆಗೆ ಶ್ರೀ ಸ್ವಾಮಿಯ ರಥಕ್ಕೆ ಅರಿಶಿಣ ಎಣ್ಣೆ ಧಾರಣೆ ಮಾಡಲಾಗುವುದು.