ಅಪ್ರಾಪ್ತ ಬೈಕ್‌ ಚಾಲನೆ : 25 ಸಾವಿರ ದಂಡ

ಸಂತೇಬೆನ್ನೂರು, ಫೆ.26- ಅಪ್ರಾಪ್ತನೊಬ್ಬ ಬೈಕ್‌ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್‌ ಮಾಲೀಕನಿಗೆ ಚನ್ನಗಿರಿಯ 2ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಫೆ.21ರಂದು ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಓಡಿಸುವವನ ತಪಾಸಣೆ ಮಾಡಲು ಮುಂದಾದಾಗ, ಅವನು ಬೈಕ್‌ ಬಿಟ್ಟು ಓಡಿ ಹೋಗಿರುತ್ತಾನೆ. ಆಗ ಬೈಕಿನ ಮಾಲೀಕರ ವಿಳಾಸ ಪತ್ತೆ ಮಾಡಿ, ವಿಚಾರಿಸಿದಾಗ ಅಪ್ರಾಪ್ತ ಬೈಕ್‌ ಚಲಾಯಿಸಿರುವುದು ಬೆಳಕಿಗೆ ಬಂದಿರುತ್ತದೆ.

ಪಿಎಸ್ಐ ಜಿ. ಜಗದೀಶ್, ಚನ್ನವೀರಪ್ಪ ಹಾಗೂ ಸಿಬ್ಬಂದಿ ನಡೆಸಿದ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಬೈಕ್‌ ಮಾಲೀಕ ಪ್ರಸನ್ನ ವಿರುದ್ಧ ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಈ ಕುರಿತಂತೆ ನ್ಯಾಯಾಲಯವು ದಂಡ ವಿಧಿಸುವ ಜತೆಗೆ ಅಪ್ರಾಪ್ತರ ಕೈಗೆ ವಾಹನ ಕೊಡದಂತೆ ಪಾಲಕರಿಗೆ ಎಚ್ಚರಿಕೆ ನೀಡಿದೆ.

error: Content is protected !!