ಪದ್ಮಸಾಲಿ ಸಮಾಜದಿಂದ ನಾಳೆ ಶಿವರಾತ್ರಿ ಕಾರ್ಯಕ್ರಮ, ರಥೋತ್ಸವ

ದಾವಣಗೆರೆ, ಫೆ. 24- ನಗರದ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ನಾಡಿದ್ದು ದಿನಾಂಕ 26 ಮತ್ತು 27 ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಸ್.ಪರಶುರಾಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಡಿದ್ದು ದಿನಾಂಕ 26 ರ ಬುಧವಾರ ಬೆಳಿಗ್ಗೆ 6.30 ರಿಂದ 7.30 ರವರೆಗೆ ಸ್ವಾಮಿಗೆ ಅಭಿಷೇಕ, ಸಂಜೆ 6.30 ರಿಂದ ವಿಶೇಷ ರುದ್ರಾಭಿಷೇಕ, ಕ್ಷೀರಾಭಿಷೇಕ, ಶಿವ ಅಷ್ಟೋತ್ತರ ನಾಮಾವಳಿ, ತಿಲಾರ್ಚನೆ, ಮಹಾಮಂಗಳಾ ರತಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆ ನಡೆಸಲಾಗುವುದು. 

ದಿನಾಂಕ 27 ರ ಗುರುವಾರ ಬೆಳಿಗ್ಗೆ 9.30 ಕ್ಕೆ ಶ್ರೀ ಸ್ವಾಮಿಯ ಬೆಳ್ಳಿ ರಥೋತ್ಸವ ಜರುಗಲಿದ್ದು, ತುಮ್ಮಿನಕಟ್ಟೆಯ ಶ್ರೀ ಪ್ರಭುಲಿಂಗ ಸ್ವಾಮೀಜಿ ಪೂಜೆ ನೆರವೇರಿಸಲಿದ್ದಾರೆ. ಎಸ್‌ಕೆಪಿ ರಸ್ತೆಯಿಂದ ಪ್ರಾರಂಭವಾಗುವ ರಥೋತ್ಸವ ದೊಡ್ಡಪೇಟೆ, ಬಿ.ಎಸ್. ಚನ್ಬಬಸಪ್ಪ ಬಟ್ಟೆ ಅಂಗಡಿ ರಸ್ತೆ, ಹಾಸಬಾವಿ ಸರ್ಕಲ್, ಗಡಿಯಾರ ಕಂಬದ ರಸ್ತೆ, ಕಾಯಿಪೇಟೆ, ಹೊಂಡದ ಸರ್ಕಲ್ ಮೂಲಕ ದೇವವಸ್ಥಾನ ತಲುಪಲಿದೆ. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬೊಮ್ಮ ತಿಪ್ಪೇಸ್ವಾಮಿ, ಸತ್ಯನಾರಾಯಣ ಶೇಫೂರ್, ನಿಂಗಪ್ಪ ಅರಣಿ, ಬಿ.ಎಸ್‌.ಕೆ. ಪರಶುರಾಮ್, ಟಿ.ಎಸ್. ರವಿಕುಮಾರ್, ಮಂಜುನಾಥ್, ಸಂಗಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!