ದಾವಣಗೆರೆ, ಫೆ. 24- ನಗರದ ಚೌಕಿಪೇಟೆಯ ಕುರುವತ್ತಿ ಶ್ರೀ ಬಸವೇಶ್ವರ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿಯಲ್ಲಿ ಇದೇ ದಿನಾಂಕ 28 ರಂದು ಸಂಜೆ 4.30 ಕ್ಕೆ ಜರುಗುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಇದೇ ದಿನಾಂಕ 26 ರಂದು ರಾತ್ರಿ 8 ಗಂಟೆಗೆ 21 ನೇ ವರ್ಷದ ಪಾದಯಾತ್ರಿಗಳಿಗೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಮಿತಿ ಸಹ ಸಂಚಾಲಕ ಶಿವಾನಂದಪ್ಪ ಬೆನ್ನೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೋಡಿಯಾಲ ಹೋಸಪೇಟೆಯ ಅವಿಮುಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದ ಬಾಲಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಎನ್.ಬಕ್ಕೇಶ್ ಅಭಿಕಾಟನ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಉಪಮೇಯರ್ ಸೋಗಿ ಶಾಂತಕುಮಾರ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ದೂಡಾ ಸದಸ್ಯೆ ಎಂ.ಆರ್. ವಾಣಿ, ಮಾಳಗೇರ ಎಂ.ಕೆ. ಬಸವರಾಜಪ್ಪ, ಕುರುವತ್ತಿ ಶ್ರೀ ಬಸವೇಶ್ವರ ಪಾದಯಾತ್ರೆ ಸೇವಾ ಸಮಿಯ ಅಧ್ಯಕ್ಷ ಕೆ.ಎ. ಸತ್ಯನಾರಾಯಣ, ಉಪಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್. ಗಿರೀಶ್, ಕೆ.ಎಂ.ಲೋಕೇಶ್ವರಯ್ಯ, ಕೆ.ಬಿ. ಶಿವಕುಮಾರ್, ಹೆಚ್. ಚನ್ನಬಸಪ್ಪ, ಬಿ.ಎಸ್. ಚೇತನ್ ಮತ್ತಿತರರು ಉಪಸ್ಥಿತರಿದ್ದರು.