ಮಾಂಟಿಸೊರಿ ಕಾನ್ವೆಂಟ್ ಶಾಲೆಯಲ್ಲಿ ಕಲೆ ಮತ್ತು ವಿಜ್ಞಾನದ ವಸ್ತು ಪ್ರದರ್ಶನವನ್ನು ಇಂದು ಬೆಳಿಗ್ಗೆ 10ಕ್ಕೆ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ.
ರಾಜ್ಯ ವಿಜ್ಞಾನ ಪರಿಷತ್ ನ ಕಾರ್ಯದರ್ಶಿ ಗುರುಸಿದ್ದ ಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾಗಿ ನಾಗರಾಜ್ ಅತಿಥಿಗಳಾಗಿ ಆಗಮಿಸುವರು. ವಿಶೇಷ ಅತಿಥಿಗಳಾಗಿ ಡಾ. ಶಶಿಕಲಾ, ಶ್ರೀಮತಿ ಶಿಲ್ಪ, ಶ್ರೀಮತಿ ಲತಾ ಭಾಗವಹಿಸುವರು. ಅಧ್ಯಕ್ಷತೆಯನ್ನು ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಎಸ್.ಎಂ. ಮಲ್ಲಮ್ಮ ವಹಿಸುವರು.