ದಾವಣಗೆರೆ, ಫೆ. 19 – ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ, ಬಾವ, ಮೈದುನ ಮಲ್ಲಿಕಾರ್ಜುನ್, ಜಮೀನು ಮಾಲೀಕ ದೇವರಾಜು ಅವರನ್ನು ನಿರ್ದೋಷಿಗಳು ಎಂದು ಮೈಸೂರು ಲೋಕಾಯುಕ್ತ ಎಸ್.ಪಿ. ಉದೇಶ್‌ರವರ ತನಿಖಾ ವರದಿಯಲ್ಲಿ ಬಂದಿರುವುದಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ-ಜೆಡಿಎಸ್ ಎಷ್ಟೇ ತಿಪ್ಪರಲಾಗ ಹಾಕಿದ್ರೂ ಸಿಎಂ ಸಿದ್ದರಾಮಯ್ಯನವರ ಪರಿಶುದ್ಧ ವ್ಯಕ್ತಿತ್ವಕ್ಕೆ ಕಳಂಕವನ್ನುಂಟು ಮಾಡಲು ಸಾಧ್ಯವಾಗಲೇ ಇಲ್ಲ. `ಸತ್ಯ ಮೇವ ಜಯತೆ’. `ಸತ್ಯಕ್ಕೆ ಸಾವಿಲ್ಲ’ ಎನ್ನುವುದು ಇದಕ್ಕೆ ಎಂದು ಬಸವರಾಜ್ ಹೇಳಿದ್ದಾರೆ.
February 22, 2025