ಹರಿಹರ, ಫೆ. 19 – ಕೊಟ್ಟೂರಿನಲ್ಲಿ ಇದೇ ದಿನಾಂಕ 22 ರಂದು ನಡೆಯುವ ಶ್ರೀ ಕೊಟ್ಟೂರು ಗುರುಬಸವೇಶ್ವರ ರಥೋ ತ್ಸವದ ನಿಮಿತ್ತವಾಗಿ ನಗರದ ರೇಣುಕಾ ಮಂದಿರದ ಆವರಣದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಕೊಟ್ಟೂರಿಗೆ ತೆರಳಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಪಾದಯಾತ್ರೆ ಹೊರಡುವ ಭಕ್ತರಿಗೆ ಬೀಳ್ಕೋಡುವ ಮೂಲಕ ಶುಭ ಕೋರಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಾದಯಾತ್ರೆ ಸೇವಾ ಸಮಿತಿಯ ಗೌರವಾಧ್ಯಕ್ಷ ಜಿ ವೀರಯ್ಯ, ಮಂಜುನಾಥ್, ಹಾಲಸ್ವಾಮಿ, ಕೊಟ್ರೇಶ್, ಅಡಕಿ ಕುಮಾರ್ ಇತರರು ಹಾಜರಿದ್ದರು.