ನಗರದಲ್ಲಿ ಇಂದು ಹೊರಗುತ್ತಿಗೆ ಗಾರ್ಡನ್ ಕೆಲಸಗಾರರ ಸಂಘದ ವಾರ್ಷಿಕೋತ್ಸವ

ಮಹಾನಗರ ಪಾಲಿಕೆ ಹೊರಗುತ್ತಿಗೆ ಗಾರ್ಡನ್ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಇಂದು ಸಂಜೆ 5.30ಕ್ಕೆ ಡಿಸಿಎಂ ಲೇಔಟ್‌ನಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಶ್ರೀ ಡಾ. ಬಸಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮಹಾಪೌರ ಎ. ಚಮನ್‌ಸಾಬ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡಪರ ಹೋರಾಟಗಾರರಾದ ನಾಗೇಂದ್ರ ಬಂಡೀಕರ್, ಕೆ.ಜಿ. ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಬನಶಂಕರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಾ. ರಂಗನಾಥ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಬಿ. ಮನೋಹರ್, ಎಂ.ಹೆಚ್. ಉದಯಕುಮಾರ್, ಶ್ರೀಮತಿ ಹೆಚ್. ಶೃತಿ, ಆರ್. ಲಕ್ಷ್ಮಣ್, ವಿಜಯಕುಮಾರ್, ಕೆ. ಅಜಯಕುಮಾರ್, ವಿಜಯ್, ಶ್ರೀಮತಿ ಲಕ್ಷ್ಮಿ, ಎ. ಅರುಣ್, ಎನ್. ಪ್ರಕಾಶ್ ಉಪಸ್ಥಿತರಿರುವರು.

error: Content is protected !!