ಮಲೇಬೆನ್ನೂರು, ಫೆ.18- ಕೊಕ್ಕನೂರು ಗ್ರಾಮದ ವೃದ್ಧೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತೊಯ್ದಿದ್ದ ಆರೋಪಿಯನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಕೊಕ್ಕನೂರು ಗ್ರಾಮದ ವೀರೇಶಾಚಾರಿ ಬಂಧಿತ ಆರೋಪಿಯಾಗಿದ್ದು, 2 ಲಕ್ಷ ಮೌಲ್ಯದ ಬಂಗಾರದ ಮಾಂಗಲ್ಯ ಸರ ವಶಕ್ಕೆ ಪಡೆಯುವ ಜತೆಗೆ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.