ದಾವಣಗೆರೆ, ಫೆ.14- ಕುರುವತ್ತಿ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಇದೇ ದಿನಾಂಕ 16 ಮತ್ತು 17ರಂದು ಕೆ.ಟಿ. ಜಂಬಣ್ಣ ನಗರದ 1ನೇ ಮುಖ್ಯ ರಸ್ತೆ, 12 ಅಡ್ಡ ರಸ್ತೆಯಲ್ಲಿನ ಕುರುವತ್ತಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ ಸಮಾರಂಭ ನಡೆಯಲಿದೆ.
ಹಿರೇಕುರುವತ್ತಿ ಹಿರೇಮಠದ ಸಿದ್ಧನಂದೀಶ್ವರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿದ್ದು ದಿನಾಂಕ 16ರ ಸಂಜೆ 6ರಿಂದ 9ರ ವರೆಗೆ ನವಗ್ರಹ ಶಾಂತಿ, ವಾಸ್ತು ಹೋಮ ಮತ್ತು ಗಣ ಹೋಮ ನಡೆಯಲಿದೆ. 17ರ ಸೋಮವಾರ ಬೆಳಗ್ಗೆ 6ರಿಂದ 9ರ ವರೆಗೆ ಸ್ವಾಮಿಗೆ ಮಹಾ ರುದ್ರಾಭಿಷೇಕ, ಕುಂಭಾಭಿಷೇಕ ನಡೆದ ನಂತರ 11.20ರಿಂದ 12.05 ರ ಶುಭ ಸಮಯದಲ್ಲಿ ಕಳಸಾರೋಹಣ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.