ಕುರ್ಕಿ ಸ.ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ ಇಂದು

ದಾವಣಗೆರೆ ದಕ್ಷಿಣ ವಲಯದ ಕುರ್ಕಿ ಸರ್ಕಾರಿ ಪ್ರೌಢಶಾಲೆಗೆ ಇ.ಆರ್.ಎಂ. ಗ್ರೂಪ್ ಆಫ್ ಕಂಪನಿ (ಬೆಂಗಳೂರು) ಛೇರ್ಮನ್ ಮತ್ತು ಮ್ಯಾನೇಜಿಂಗ್  ಡೈರೆಕ್ಟರ್ ಆರ್. ಪ್ರವೀಣ್ ಚಂದ್ರ ಅವರ ಸಹಕಾರದೊಂದಿಗೆ ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್‌ನಿಂದ 1.5 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಾಣವಾಗಿದ್ದು, ಇಂದು ಮಧ್ಯಾಹ್ನ 3 ಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ. ಇಟ್ನಾಳ್ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾನಗರ ರೋಟರಿ ಕ್ಲಬ್‌  ಅಧ್ಯಕ್ಷ ಎಸ್. ಎನ್. ಮಳವಳ್ಳಿ ವಹಿಸಲಿದ್ದಾರೆ.  ಆರ್. ಪ್ರವೀಣ್ ಚಂದ್ರ,  ದಾವಣಗೆರೆ ಜೋನ್ ಅಸಿಸ್ಟೆಂಟ್ ಗೌರ್ನರ್  ಎಂ. ಎನ್. ಬಿಲ್ಲಳ್ಳಿ, ಡಿಡಿಪಿಐ ಕೆ.ಸಿ. ಕೊಟ್ರೇಶ್, ಹಾವೇರಿ ಜಿಲ್ಲೆಯ ಶಿಕ್ಷಣಾಧಿಕಾರಿ ಕೆ.ಬಿ. ಮೀರಾ, ಕುರ್ಕಿ ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ವಿ. ಓಂಕಾರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

error: Content is protected !!