ನಾಡಿದ್ದು ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ಹರಿಹರ ಕ್ಷೇತ್ರ ಪಾಲಕ ಹರಿಹರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ನಾಡಿದ್ದು ದಿನಾಂಕ 12ಕ್ಕೆ ಜರುಗಲಿದ್ದು, ರಥೋತ್ಸವ ನಿಮಿತ್ಯ ಈಗಾಗಲೇ ವಿವಿಧ ಪೂಜಾ ಪದ್ಧತಿಗಳು ಆರಂಭವಾಗಿವೆ.

ಇಂದಿನಿಂದ ಇದೇ ದಿನಾಂಕ 13ರ ವರೆಗೆ ಕ್ಷೇತ್ರದ ಪರಂಪರೆಯ ಪ್ರಕಾರ ಪೂಜೆಗಳು ನಡೆಯ ಲಿದ್ದು, ನಾಡಿದ್ದು ದಿನಾಂಕ 12ರ ಬುಧವಾರ ಬೆಳಗ್ಗೆ 10.25ಕ್ಕೆ ಮೇಷ ಲಗ್ನದಲ್ಲಿ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ.

ಇಂದು ಸಾಯಂಕಾಲ ಪಂಚೋಪ ಚಾರ ಪೂಜಾ, ಬಲಿದಾನ `ಅಶ್ವೋತ್ಸವ’ ನಡೆಯಲಿದೆ. ರಾತ್ರಿ 8.35ಕ್ಕೆ `ಹರಿಹರೇಶ್ವರ ಸ್ವಾಮಿಯ ಕಲ್ಯಾಣೋತ್ಸವ’ ಮಂತ್ರ ಪುಷ್ಪ, ಮಹಾಮಂಗಳಾರತಿ ನಡೆಯಲಿದೆ.

ನಾಳೆ ಮಂಗಳವಾರ ಸಂಜೆ `ಗಜೋತ್ಸವ’ ನಡೆಯಲಿದೆ. ದಿನಾಂಕ 13ರ ಗುರುವಾರ ಗಣಪತಿ ಪೂಜಾ, ರುದ್ರಾಭಿಷೇಕ, ಕಂಕಣ ವಿಸರ್ಜನೆ, ಧ್ವಜಾ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳಲಿವೆ. ಅದೇ ದಿನ ಸಂಜೆ 6ಕ್ಕೆ ನಟರಾಜ ನಾಟ್ಯ ಕೇಂದ್ರದ ಕಲಾವಿದರಿಂದ `ಭರತ ನಾಟ್ಯ ಕಾರ್ಯಕ್ರಮ’ ಹರಿಹರದ ಶ್ರೀನಿಧಿ ಅವರಿಂದ `ವೀಣಾ ವಾದನ’ ನಡೆಯಲಿದೆ.

error: Content is protected !!