ಹೊನ್ನಾಳಿ, ಫೆ. 09 – ಹೊನ್ನಾಳಿ ಶಿವ ಕೋ ಆಪ್ ಸೊಸೈಟಿಯ 15 ಕ್ಷೇತ್ರಗಳಲ್ಲಿ 9ರಲ್ಲಿ ಅವಿರೋಧ ಆಯ್ಕೆಯಾಗಿದ್ದು, 6ರಲ್ಲಿ 4ಕ್ಷೇತ್ರಗಳ ಫಲಿತಾಂಶ ಇಂದು ಹೊರಬಂದಿದ್ದು, 2 ಕ್ಷೇತ್ರಗಳ ಫಲಿತಾಂಶ ಕೋರ್ಟ್ ಆದೇಶದ ನಂತರ ಪ್ರಕಟವಾಗಲಿದೆ ಎಂದು ಸೊಸೈಟಿ ಕಾರ್ಯದರ್ಶಿ ರುದ್ರೇಶ್ ತಿಳಿಸಿದರು.
ಪಲಿತಾಂಶ ಪ್ರಕಟವಾದ ಕ್ಷೇತ್ರಗಳ ವಿವರ: ಕುಂದೂರು ಗೀತಾಗುರುರಾಜ, ಬೆನಕನಹಳ್ಳಿ ಹೆಚ್.ಜಿ. ರುದ್ರೇಶಪ್ಪ, ಬೆಳಗುತ್ತಿ ಟಿ. ನಾಗರಾಜಪ್ಪ, ಸುರಹೊನ್ನೆ ಸದಾಶಿವ ಇವರು ಆಯ್ಕೆಯಾಗಿದ್ದಾರೆ. ಕೋರ್ಟ್ ಆದೇಶದ ನಂತರ ಸಾಸ್ವೆಹಳ್ಳಿ, ಚೀಲೂರು ಫಲಿತಾಂಶ ಪ್ರಕಟಗೊಳ್ಳುವುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.