ಭರಮಸಾಗರದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಇಂದು

ಭರಮಸಾಗರದಲ್ಲಿ ಇಂದು ಸಂಜೆ 6.30ಕ್ಕೆ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ  `ನ್ಯಾಯಾಲಯ ಮತ್ತು ಸಮಾಜ’ ಶೀರ್ಷಿಕೆಯಡಿ ಐದನೇ ದಿನದ ಕಾರ್ಯಕ್ರಮ ನಡೆಯಲಿದೆ.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಸಂತೋಷ್ ಹೆಗ್ಡೆ, ಪ್ರಭಾಕರ ಶಾಸ್ತ್ರಿ,  ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ  ನ್ಯಾಯಮೂರ್ತಿಗಳಾದ ಕೃಷ್ಣಾ ಎನ್. ದೀಕ್ಷಿತ್, ವೇದವ್ಯಾಸಾಚಾರ್ ಶ್ರೀಶಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನ್ಯಾಯಮೂರ್ತಿ ಹೆಚ್.ಎ.ಮೋಹನ್, ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಹೈಕೋರ್ಟ್ ವಕೀಲರಾದ ಸಂದೀಪ್ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಬಿ. ನಾಡಗೌಡ ಉಪನ್ಯಾಸ ನೀಡಲಿದ್ದಾರೆ. ಮಂಡ್ಯದ ಸಾಹಿತಿ ಡಾ. ಪ್ರದೀಪ್ ಕುಮಾರ ಹೆಬ್ರಿ ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಂಚೋಳಿ ಚಂದಾಪುರ ಆಕಾಶವಾಣಿ ಕಲಾವಿದ ರೇವಣಸಿದ್ಧಯ್ಯ ಹಿರೇಮಠ ಹಾಗೂ ತಂಡದವರಿಂದ ವಚನಗೀತೆ, ಬಹದ್ದೂರುಘಟ್ಟ ಶ್ರೀಮತಿ ಕಲ್ಲಮ್ಮ ಪ್ರೌಢಶಾಲೆಯ ಸೋಲಿಗರ ನೃತ್ಯ ತಂಡದಿಂದ ಜಾನಪದ ಸಿರಿ, ದಾವಣಗೆರೆ ಅನುಭವ ಮಂಟಪದ ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆಯ ತಂಡದಿಂದ ಜಾನಪದ ನೃತ್ಯ, ಸಿರಿಗೆರೆ ತರಳಬಾಳು ಕಲಾ ಸಂಘದಿಂದ ಗೋವಿನಹಾಡು ನೃತ್ಯ ರೂಪಕ ಹಾಗೂ ದಾವಣಗೆರೆ ಅನುಭವ ಮಂಟಪದ ಶಾಲೆಯ ಐಸಿಎಸ್‌ಇ ವಿಭಾಗದ ತಂಡದಿಂದ ಸಮಾಯ್ ನೃತ್ಯ ಏರ್ಪಡಿಸಲಾಗಿದೆ. 

error: Content is protected !!