ದಾವಣಗೆರೆ, ಜ.31- ತಾಲ್ಲೂಕಿನ ಆಲೂರು ಗ್ರಾಮದ ಎಂಜಿಆರ್ ಕ್ರಷರ್ ಹತ್ತಿರ ಗಂಡಸಿನ ಶವ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗೆ ಗ್ರಾಮಾಂತರ ಪೊಲೀಸರು ಮನವಿ ಮಾಡಿದ್ದಾರೆ.
ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆ ಯಾಗಿದ್ದು, ಕಾಡು ಪ್ರಾಣಿಗಳು ಈ ವ್ಯಕ್ತಿಯನ್ನು ಕಿತ್ತು ತಿಂದಿರಬಹುದೆಂಬ ಶಂಕೆಯಿದ್ದು, ಮುಖ ಕೊಳೆತು ಗುರುತು ಸಿಗದಂತಾಗಿದೆ. ಸಂಬಂಧಪಟ್ಟವರು ಗ್ರಾಮಾಂತರ ಪೊಲೀಸ್ ಠಾಣೆ (08192-262555, 94808 03256) ಯನ್ನು ಸಂಪರ್ಕಿಸಬಹುದು.