ಸಿದ್ದಾರೂಢ ಮಠದಲ್ಲಿ ಶ್ರೀ ಮಲ್ಲಯ್ಯಜ್ಜನವರ ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 25ನೇ ವರ್ಷದ ವೇದಾಂತ ಪರಿಷತ್ ಹಾಗೂ ಕೊನೆಯ ದಿನ ಶ್ರೀ ಸಿದ್ದಾರೂಢರ 11 ನೇ ವರ್ಷದ ಮಹಾರಥೋತ್ಸವ ನಡೆಯಲಿದೆ. ಮಹಾಸಭೆಯಲ್ಲಿ ಹುಬ್ಬಳ್ಳಿ ಸಿದ್ದಾರೂಢ ಮಠದ ಸಚ್ಚಿದಾನಂದ ಶ್ರೀಗಳು, ತೆಲಗಿ ಪೂರ್ಣಾನಂದ ಶ್ರೀಗಳು, ಸೌಟಗಿ ಲಿಂಗಯ್ಯ ಸ್ವಾಮಿಗಳು, ಜಡೇ ಸಿದ್ದೇಶ್ವರ ಮಠದ ರಮಾನಂದ ಶ್ರೀಗಳು, ಗುತ್ತೂರು ಪ್ರಭುಲಿಂಗ ಶ್ರೀಗಳು ಭಾಗವಹಿಸುವರು.
February 1, 2025