ಸಾಣೇಹಳ್ಳಿಯಿಂದ ಸಂತೇಬೆನ್ನೂರಿನವರೆಗೆ `ನಮ್ಮ ನಡೆ ಸರ್ವೋದಯದೆಡೆಗೆ’

ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದಿನಿಂದ ಇದೇ ದಿನಾಂಕ 30 ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ `ನಮ್ಮ ನಡೆ ಸರ್ವೋದಯದೆಡೆಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸರ್ವೋದಯ ರಾಜ್ಯ ಸಂಚಾಲಕ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ. 

ಇಂದು ಬೆಳಿಗ್ಗೆ 8 ಗಂಟೆಗೆ ಸಾಣೇಹಳ್ಳಿಯಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಬೇಗೂರು, ಅಜ್ಜಂಪುರ, ಬುಕ್ಕಾಂಬುದಿ, ತಾವರೆಕೆರೆ, ಪಾಂಡೋಮಟ್ಟಿ, ಚನ್ನಗಿರಿ, ದೇವರಹಳ್ಳಿ ಮೂಲಕ ಸಂತೇಬೆನ್ನೂರಿನಲ್ಲಿ ಮುಕ್ತಾಯವಾಗಲಿದೆ.  

error: Content is protected !!