ದುಶ್ಚಟಗಳಿಂದ ಹೊರ ಬಂದು ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈ ಜೋಡಿಸಿ

ದುಶ್ಚಟಗಳಿಂದ ಹೊರ ಬಂದು ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈ ಜೋಡಿಸಿ

ದಾವಣಗೆರೆ, ಜ.26- ಜನರು ದುಶ್ಚಟಗಳಿಂದ ಹೊರ ಬಂದು ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. 

ನಗರದ ಶ್ರೀಮತಿ ಪುಷ್ಪಾ ಶಾಮನೂರು ಮಹಾಲಿಂಗಪ್ಪ ಶಾಲೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಡ್ರಗ್ಸ್ ಫ್ರೀ ಸೈಕಲ್ ರಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಿ ದೇಶ ಕ್ಕೆ ಆಸ್ತಿಯಾಗಬೇಕು. ಈ ನಿಟ್ಟಿನಲ್ಲಿ ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳಬೇಕು  ಎಂದರು.

 ಕೇವಲ ಓದುವುದಷ್ಟೇ ಒಳ್ಳೆಯ ಅಭ್ಯಾಸವಲ್ಲ. ಸಂಸ್ಕೃತಿ, ವಿನಯವೂ ಉತ್ತಮ ನಡುವಳಿಕೆ ಆಗಿದೆ. ವಿದ್ಯೆಯಿಂದ ವಿನಯ, ಸಂಸ್ಕೃತಿ ಮೈಗೂಡಲಿದೆ. ವಿದ್ಯೆ ಕಲಿಯದಿದ್ದರೆ ಜೀವನವೇ ವ್ಯರ್ಥವಾಗಲಿದೆ. ಮೊಬೈಲ್ ಬಳಕೆ ಯೂ ದುಶ್ಚಟವೇ ಆಗಿದ್ದು, ಅದನ್ನು ಅವಶ್ಯಕ ತೆಗೆ ತಕ್ಕಷ್ಟು ಮಾತ್ರ ಬಳಸಬೇಕು ಎಂದರು.

ಮಾದಕ ವಸ್ತುಗಳ ವಿರುದ್ಧ ಜಾಗೃತಿಗಾಗಿ ಸೈಕಲ್‌ ರಾಲಿ ಆಯೋಜಿಸಿರುವ ಶಾಲೆಯ ಕಾರ್ಯ ಶ್ಲ್ಯಾಘನೀಯ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಸಹ ಈ ಜಿಲ್ಲೆಗೆ ಮಾದರಿಯಾಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ,  ಯುವ ಜನತೆ ಮಾದಕ ವಸ್ತುಗಳನ್ನು ಸೇವಿಸಬಾರದು. ನಿಮ್ಮ ಸಹಪಾಠಿಗಳು ಯಾರಾದರೂ ಸೇವಿಸಿ ದರೂ ಉಪನ್ಯಾಸಕರು ಮತ್ತು ಪ್ರಾಚಾರ್ಯರಿಗೆ ಮಾಹಿತಿ ನೀಡಬೇಕು. ಮಾದಕ ವ್ಯಸನಿಗಳಲ್ಲಿ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಮಾದಕ ವಸ್ತುವನ್ನು ಸೇವಿಸುವುದರಿಂದ ಬೇರೆ ಪ್ರಪಂಚಕ್ಕೆ ಹೋದಂತಾಗುತ್ತದೆ ಎಂಬ ಭ್ರಮೆಯಿಂದ ದುಶ್ಚಟಕ್ಕೆ ಜನರು ಬಲಿಯಾಗುತ್ತಿದ್ದಾರೆ. ಅಂತಹ ಪ್ರಯೋಗ ಯಾರೂ ಮಾಡಬಾರದು. ಒಮ್ಮೆ ದುಶ್ಚಟಕ್ಕೆ ದಾಸರಾದರೆ ಮತ್ತೆ ವಾಪಸ್ ಬರಲಾಗಲ್ಲ. ಬಳಿಕ ನಿಮ್ಮ ತಂದೆ-ತಾಯಿ ಕಷ್ಟ ಪಡಬೇ ಕಾಗುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರ ಉಳಿಯಬೇಕು ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಛೇರ್‌ಮನ್ ಎಚ್.ಮಹಾಲಿಂಗಪ್ಪ, ಟ್ರಸ್ಟಿ ಪುಷ್ಪಾ ಮಹಾಲಿಂಗಪ್ಪ, ಡೀನ್ ಸಿಲ್ಜಿ ಜೋಸ್, ಪ್ರಾಚಾರ್ಯ ಬಿ.ಆರ್. ಅಶೋಕ್‌ ಮತ್ತಿತರರಿದ್ದರು.

error: Content is protected !!