ಮಲೇಬೆನ್ನೂರು, ಜ. 24- ಭಾನುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗದ ಎಸ್.ಎನ್. ಬಸವರಾಜಪ್ಪ, ಬಿ. ಜಯಪ್ಪ, ಕೆ. ಮಹೇಶಪ್ಪ, ಡಿ.ಹೆಚ್.ಬಸವರಾಜಪ್ಪ, ಪಿ. ಗುಡ್ಡಪ್ಪ, ಎಸ್ಸಿ ಮೀಸಲು ವರ್ಗದ ಬಿ.ಎಸ್. ಸದಾನಂದಪ್ಪ, ಬಿಸಿಎಂ `ಬಿ’ ವರ್ಗದ ಬಿ. ವೀರೇಶ್, ಮಹಿಳಾ ಮೀಸಲು ವರ್ಗದ ಬಲ್ಕೀಷ್ ಭಾನು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಬಲ್ಲೂರು ಮಹೇಂದ್ರ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಇಲಾಖೆಯ ಉಷಾದೇವಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರೆಂದು ಸಂಘದ ಸಿಇಓ ಈರಪ್ಪ ತಿಳಿಸಿದ್ದಾರೆ.