ಅಂಗಾಂಗ ದಾನ ಮಾಡಿದ ಪಾಲಕರಿಗೆ ಗಣರಾಜ್ಯೋತ್ಸವ ದಿನ ಸನ್ಮಾನ

ದಾವಣಗೆರೆ, ಜ.24-  ಕಳೆದ ನವೆಂಬರ್ 19 ರಂದು  ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ 19 ವರ್ಷದ ಯು.ಎಲ್ ಸುಜಿತ್ ಕುಮಾರ್ ಅವರ ಐದು ಅಂಗಾಂಗಗಳನ್ನು  ಮೃತರ ಇಚ್ಚೆಯ ಪ್ರಕಾರ ದಾನ ಮಾಡಿದ ಪಾಲಕರನ್ನು ನಾಡಿದ್ದು 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.

error: Content is protected !!