ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿಂದು – ನಾಳೆ ಎಡೆ ಜಾತ್ರೆ

ಹೊಂಡದ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಮತ್ತು ನಾಳೆ ಎಡೆ ಜಾತ್ರೆ ನಡೆಯಲಿದೆ.

ಇಂದು ರಾತ್ರಿ 8 ಗಂಟೆಗೆ ವಿವಿಧ ಗ್ರಾಮಗಳಿಂದ ಬರುವ ಶ್ರೀ ಬೀರದೇವರುಗಳನ್ನು ಪಿ.ಬಿ. ರಸ್ತೆಯಲ್ಲಿರುವ ಹೊರಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೊಳೆಪೂಜೆ ನೆರವೇರಿಸಲಾಗುವುದು. ನಂತರ ಅಲ್ಲಿಂದ ಹೊಂಡದ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಮೆರವಣಿಗೆ ಮೂಲಕ ಶ್ರೀ ಬೀರದೇವರುಗಳನ್ನು ಬರ ಮಾಡಿಕೊಳ್ಳಲಾಗುವುದು.

ನಾಳೆ ಭಾನುವಾರ ಬೆಳಿಗ್ಗೆ 8 ಗಂಟೆೆಗೆ ಶ್ರೀ ಸ್ವಾಮಿಗೆ ಅಭಿಷೇಕ, ಬೆಳಿಗ್ಗೆ 10.30ಕ್ಕೆ ಎಡೆ ಜಾತ್ರೆ ಕಾರ್ಯಕ್ರಮ, ನಂತರ ಸರ್ವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. 

ಶ್ರೀ ಕನಕ ಗುರು ಪೀಠ ಹೊಸದುರ್ಗ ಶಾಖೆಯ ಜಗದ್ಗುರು ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಲಿವೆ.

error: Content is protected !!