ಶುಕ್ರವಾರ ಬಂದ ಲಕ್ಷ್ಮೀ: ಸಂಭ್ರಮ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ : ಜಿಲ್ಲೆಯಲ್ಲಿ ಇಂದು ಜನಿಸಿದ 14 ಹೆಣ್ಣು ಮಕ್ಕಳಿಗೆ ಉಡುಗೊರೆ: ಸಿಹಿ ವಿತರಿಸಿ ಸಂಭ್ರಮಿಸಿದ ವೈದ್ಯರು

ದಾವಣಗೆರೆ, ಜ.24- ಜಿಲ್ಲೆಯಲ್ಲಿ ಶುಕ್ರವಾರ ಜನಿಸಿದ 14  ಹೆಣ್ಣು ಮಕ್ಕಳು ತಲಾ ಒಂದು ಸಾವಿರ ರೂ. ಮೌಲ್ಯದ ಉಡುಗೊರೆಯ ಕಿಟ್ ಪಡೆಯಲಿದ್ದಾರೆ.

ಹೌದು, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆ ಗಳಲ್ಲಿ ಇಂದು ಜನಿಸುವ ಮಕ್ಕಳಿಗೆ ರಾಜ್ಯ ಸರ್ಕಾರದ ವತಿಯಿಂದ 1,000 ರೂ. ಗಳ ಮಕ್ಕಳ ಕಿಟ್ ವಿತರಣೆ ಮಾಡ ಲಾಗುತ್ತದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದರು.ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 5, ಸಿ.ಜೆ. ಆಸ್ಪತ್ರೆ ಯಲ್ಲಿ 3, ಹರಿಹರ 4, ಜಗಳೂರು ಮತ್ತು ಹೊನ್ನಾಳಿಯಲ್ಲಿ ತಲಾ ಒಂದೊಂದು ಹೆಣ್ಣು ಮಗು ಜನಿಸಿದೆ. ಒಟ್ಟಾರೆ  ಜಿಲ್ಲೆಯಲ್ಲಿ ಜನಿಸಿರುವ 14 ಜನ ಹೆಣ್ಣುಮಕ್ಕಳಿಗೆ ರಾಜ್ಯ ಸರ್ಕಾರದ ವತಿಯಿಂದ ಉಡುಗೊರೆ ಸಿಗಲಿದೆ.

ಇಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಗೆ ಸಾಂಕೇತಿಕವಾಗಿ ಸಿಹಿ ತಿಂಡಿಯ ಬಾಕ್ಸ್, ಹಣ್ಣುಗಳು ಮತ್ತು ಗುಲಾಬಿಯನ್ನು ನೀಡಲಾಗಿದೆ ಎಂದು ಎಂದು ಡಿಹೆಚ್‍ಓ ಡಾ.ಎಸ್. ಷಣ್ಮುಖಪ್ಪ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ಮಧು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಕೆ. ರುದ್ರಸ್ವಾಮಿ, ಐ.ಇ.ಸಿ. ವಿಭಾಗದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಸುರೇಶ್ ಬಾರ್ಕಿ ಮತ್ತಿತರರಿದ್ದರು.  

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾ ಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಗುಲಾಬಿ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು. 

error: Content is protected !!