ನಗರದಲ್ಲಿಂದು ಸಂದಲ್, ನಾಳೆ ಉರುಸ್

ದಾವಣಗೆರೆ, ಜ.21- ಹೊಂಡದ ಸರ್ಕಲ್ ಸುಲ್ತಾನ್ ಪೇಟೆಯಲ್ಲಿರುವ ಹಜರತ್ ಸೈಯದ್ ರತನ್ ಷಾವಲಿ ಚಿಸ್ತಿ (ರತನ್ ಬುಡನ್ ಬಾದೇಷಾ ರ. ಅ) ಅವರ ಉರುಸ್ ನಾಡಿದ್ದು ದಿನಾಂಕ 23ರ ಗುರುವಾರ ಜರುಗಲಿದೆ.

ನಾಳೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಡಿ. ಮಾಲತೇಶ್ ಫೈಲ್ವಾನ್ ಅವರ ಮನೆಯಿಂದ ಗಂಧ ಪಡೆದು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಫಕೀರ್ ಸ್ವಾಮಿಗಳ ಜರಬ್ ನೊಂದಿಗೆ ಸಾಯಂಕಾಲ ದರ್ಗಾ ತಲುಪಿ ಗಲೀಫಿ ಚಾದರ್ ಅರ್ಪಿಸುವ ಮೂಲಕ ಸಂದಲ್ ಆಚರಿಸಲಾಗುವುದು.

ನಾಡಿದ್ದು ದಿನಾಂಕ 23 ರ ಗುರುವಾರ ಉರುಸ್ ದರ್ಗಾದಲ್ಲಿ ಫಾತೇಹಾ ಖ್ವಾನಿ ಜರುಗಲಿದೆ. ಅತಿಥಿಗಳಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.

ದಿನಾಂಕ 24 ರಂದು ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತೌಫೀಕ್ ಆಹಮ್ಮದ್ ತಿಳಿಸಿದ್ದಾರೆ.

error: Content is protected !!