ಬೈಕ್ ಅಪಘಾತ: ಅಪರಿಚಿತ ಶವ ಪತ್ತೆ

ಹರಿಹರ, ಜ.21- ತಾಲ್ಲೂಕಿನ ಮಿಟ್ಲಕಟ್ಟೆ-ದೇವರಬೆಳಕೆರೆ ರಸ್ತೆಯಲ್ಲಿ ಬೈಕ್ ಅಪಘಾತವಾಗಿ ಅಪರಿಚಿತ ವ್ಯಕ್ತಿ (73) ಮೃತಪಟ್ಟಿದ್ದು, ವಾರಸು ದಾರರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಬಿಳಿ ಶರ್ಟ್‌, ಬಿಳಿ ಬನಿಯನ್‌ ಹಾಗೂ ಬಿಳಿ ಪಂಚೆ ಧರಿಸಿದ್ದಾರೆ. ಅಪರಿಚಿತ ಬಗ್ಗೆ ಮಾಹಿತಿ ಸಿಕ್ಕಲ್ಲಿ  08192-272018, 9480803234 ಹಾಗೂ 9480803222 ಈ ಸಂಖ್ಯೆಗೆ ಸಂಪರ್ಕಿಸಬಹುದು.

error: Content is protected !!