ದಾವಣಗೆರೆ, ಜ. 17- ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯ ಆಶ್ರಯದಲ್ಲಿ ಇದೇ ದಿನಾಂಕ 20 ರಂದು ನಡೆಯುವ ಸಮಾರಂಭದಲ್ಲಿ ಬಹುಮುಖ ಪ್ರತಿಭೆ, ವಿವಿಧ ಸಂಘಟನೆಗಳ ನಿರಂತರ ಕಠಿಣ ಪರಿಶ್ರಮದ ನಾಲ್ಕು ದಶಕಗಳ ಕಾಲ ಶೈಕ್ಷಣಿಕ, ಸಾಮಾಜಿಕ, ಅಧ್ಯಾತ್ಮಗಳ ಕಾಳಜಿಯ ಸಾಧನೆಯನ್ನು ಗುರುತಿಸಿ ಸಾಲಿಗ್ರಾಮ ಗಣೇಶ್ ಶೆಣೈ ಅವರನ್ನು `ಜ್ಞಾನ ವಿಭೂಷಣ’ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ.ಎಲ್.ಹೆಚ್. ಪೆಂಡಾರಿ ತಿಳಿಸಿದ್ದಾರೆ. ನಿರಂತರವಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸುತ್ತಿರುವ ಶೆಣೈ ಅವರಿಗೆ ಕಲಾಕುಂಚ, ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
January 18, 2025