ದಾವಣಗೆರೆ, ಜ.17- ಪಶುಪಾಲನಾ ಮತ್ತು ಪಶುವೈದ್ಯ ಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ, ಆಧುನಿಕ ಹೈನುಗಾರಿಕೆ ತರಬೇತಿ ಆಯೋಜಿಸಲಾಗಿದೆ. ಇದೇ ದಿನಾಂಕ 20 ಮತ್ತು 21 ರಂದು ಕುರಿ ಮತ್ತು ಮೇಕೆ ಸಾಕಾಣಿಕೆ, 30 ಮತ್ತು 31 ರಂದು ಆಧುನಿಕ ಹೈನುಗಾರಿಕೆ ತರಬೇತಿಯನ್ನು ಆಯೋಜಿಸಿದ್ದು, ವಿವರಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳ ಬಹುದು ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
January 18, 2025