ಚಳ್ಳಕೆರೆ, ಜ. 17- ಇಲ್ಲಿನ ನಗರಸಭೆ ವ್ಯಾಪ್ತಿಗೆ ಬರುವ ಬಾಡಿಗೆದಾರರಿಗೆ ನೋಟಿಸ್ ನೀಡಿ ಹತ್ತು ದಿನಗಳಾದರೂ ಮಳಿಗೆಗಳನ್ನು ಖಾಲಿ ಮಾಡಿಲ್ಲ. ಲೋಕೋಪಯೋಗಿ ಇಲಾಖೆ ವರದಿ ನೀಡಿದ ಪ್ರಕಾರ ಮಳಿಗೆಗಳು ಸುಮಾರು ವರ್ಷಗಳ ಕಾಲ ಬಾಡಿಗೆ ಇದ್ದು, ಮಾಳಿಗೆ ಬೀಳುವ ಸ್ಥಿತಿಯಲ್ಲಿವೆ. ನ್ಯಾಯಾಲಯದ ನಿರ್ದೇಶನದಂತೆ ಬಾಡಿಗೆದಾರರನ್ನು ಖಾಲಿ ಮಾಡಿಸಿ ಮಳಿಗೆಗಳನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಿಸುವ ಉದ್ದೇಶವಿದೆ.
ವಿದ್ಯುತ್ ಸ್ಥಗಿತಗೊಳಿಸಿ ಬಾಡಿಗೆದಾರರಿಗೆ ಮೂರು ದಿನ ಕಾಲಾವಕಾಶ ನೀಡಲಾಗುವುದು. ಖಾಲಿ ಮಾಡದಿದ್ದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರ ಸಮ್ಮುಖದಲ್ಲಿ ಮಾಳಿಗೆ ಖಾಲಿ ಮಾಡಿಸಲಾಗುವುದು ಎಂದು ನಗರಸಭಾ ಪೌರಾಯುಕ್ತ ಜಗರೆಡ್ಡಿ ಪತ್ರಿಕೆಯೊಂದಿಗೆ ಗೆ ಮಾತನಾಡುತ್ತಾ ತಿಳಿಸಿದರು.
ಮಳಿಗೆಗಳಲ್ಲಿ ಸುಮಾರು 50 ವರ್ಷಗಳ ಕಾಲ ವ್ಯಾಪಾರ ಮಾಡಿಕೊಂಡಿರುವವರು ಕೇವಲ 500-1000 ರೂ. ಬಾಡಿಗೆ ಪಾವತಿ ಮಾಡುತ್ತಿದ್ದಾರೆ. ಕೆಲವು ಬಾಡಿಗೆದಾರರು ಮೃತಪಟ್ಟಿದ್ದಾರೆ. ಬೇರೆಯವರಿಗೆ ಬಾಡಿಗೆ ಕೊಟ್ಟು 15-20 ಸಾವಿರ ರೂ. ಹಣ ಪಡೆಯುತ್ತಿದ್ದಾರೆ. ಇದರಿಂದ ನಗರಸಭೆಗೆ ನಷ್ಟ ಉಂಟಾಗುತ್ತದೆ. ಮಳಿಗೆಗಳನ್ನು ಖಾಲಿ ಮಾಡಿಸಿ ನಗರಸಭೆ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಇಲ್ಲಿನ ಸಂಘ-ಸಂಸ್ಥೆ ಮತ್ತು ಸ್ಥಳೀಯ ಹೋರಾಟಗಾರರು ಮತ್ತು ಹೋರಾಟ ಮಾಡಿದ ಸಂಘ-ಸಂಸ್ಥೆಗಳ ಕಾರ್ಯಕರ್ತರು ಬಾಡಿಗೆದಾರ ಖಾಲಿ ಮಾಡದ ಕಾರಣ ವಿದ್ಯುತ್ ಕಡಿತಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.