ಬಿಜೆಪಿ ಮಂಡಲಗಳಿಗೆ ನೂತನ ಅಧ್ಯಕ್ಷರುಗಳ ಆಯ್ಕೆ

ಬಿಜೆಪಿ ಮಂಡಲಗಳಿಗೆ ನೂತನ ಅಧ್ಯಕ್ಷರುಗಳ ಆಯ್ಕೆ

ದಾವಣಗೆರೆ, ಜ. 17 – ಭಾರತೀಯ ಜನತಾ ಪಾರ್ಟಿ 2025ರ ಸಂಘಟನಾ ಪರ್ವ ಕಾರ್ಯದಲ್ಲಿ ದಾವಣಗೆರೆ ಉತ್ತರ ಮತ್ತು ಮಾಯಕೊಂಡ ಮಂಡಲಗಳಿಗೆ ಸಾಮಾನ್ಯ ಸದಸ್ಯತ್ವ, ಸಕ್ರಿಯ ಸದಸ್ಯತ್ವ ಮತ್ತು ಭೂತ್ ಸಮಿತಿ ರಚನೆ ಮಾಡಲಾಯಿತು. ಸಂಬಂಧಪಟ್ಟ ಮಂಡಲಗಳಲ್ಲಿ, ಮಂಡಲದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕ್ಷೇತ್ರದ ಪ್ರಮುಖರು, ಹಿರಿಯರ ಜೊತೆ ಸಮಾಲೋಚಿಸಿ, ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ, ಜಿಲ್ಲಾ ಚುನಾವಣಾ ಅಧಿಕಾರಿ ಹೆಚ್.ಟಿ.ಭೈರಪ್ಪನವರ ಆದೇಶದಂತೆ ದಾವಣಗೆರೆ ಉತ್ತರಕ್ಕೆ  ತಾರೇಶ್ವರನಾಯ್ಕ ಕೆ. ಮತ್ತು ಮಾಯಕೊಂಡಕ್ಕೆ  ಬಿ.ಜಿ. ಸಚಿನ್ ನೇಮಕಗೊಂಡಿದ್ದಾರೆ.

error: Content is protected !!