ಎಐಸಿಟಿಇ ಐಡಿಯಾ ಲ್ಯಾಬ್ ಯೋಜನೆ ಅಡಿಯಲ್ಲಿ ಜೈನ್ ಕಾಲೇಜಿಗೆ ಅನುದಾನ

ದಾವಣಗೆರೆ, ಜ. 21- ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಎಐಸಿಟಿಇ ಐಡಿಯಾ ಲ್ಯಾಬ್ ಯೋಜನೆ ಅಡಿಯಲ್ಲಿ ಆಯ್ಕೆಯಾಗಿದೆ. ಈ ಯೋಜನೆಯಡಿ ಸಂಸ್ಥೆಗೆ ವಿದ್ಯಾರ್ಥಿಗಳ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿ ತಾಂತ್ರಿಕತೆಯ ಹೊಸ ಕಲ್ಪನೆಗಳನ್ನು ರೂಪಿಸಲು ಬೇಕಾಗುವ ಪರಿಕರಗಳಿಗೆ ಅನುದಾನವನ್ನು ಕೊಡಲಾಗುವುದು. ಈ ಯೋಜನೆಯ ಉದ್ದೇಶ, ಕಾಲೇಜಿನ ವಿದ್ಯಾರ್ಥಿಗಳ ನೈಪುಣ್ಯತೆಯ ಅಭಿವೃದ್ದಿಗೆ ನೆರವು ನೀಡುವುದಾಗಿದ್ದು, ಈ ಅನುದಾನವನ್ನು ವೈಜ್ಞಾನಿಕತೆ ಮತ್ತು ತಾಂತ್ರಿಕತೆಯ ಕಲ್ಪನೆಗಳ ಉತ್ತೇಜನಕ್ಕಾಗಿ ಹೊಸ ಆವಿಷ್ಕಾರ ಮತ್ತು ಪ್ರಯೋಗಶೀಲತೆಯ ಪ್ರೇರಣೆಗೆ ಬಳಸಲಾಗುವುದು. ಈ ಯೋಜನೆಯು ಜೈನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಭಾವವನ್ನು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ವಿಸ್ತರಿಸಲಿದೆ. ನವೋದ್ಯಮವನ್ನು ಉತ್ತೇಜಿಸುವ ಜೊತೆಗೆ ವಿದ್ಯಾರ್ಥಿಗಳಿಗೆ  ಪ್ರಾಯೋಗಿಕ ಶಿಕ್ಷಣದ ಅನುಭವವನ್ನು ನೀಡಲು ಈ ಯೋಜನೆ ನೆರವಾಗಲಿದೆ. 

ಸಂಸ್ಥೆಯ ಪ್ರಾಚಾರ್ಯ ಡಾ. ಗಣೇಶ್ ಡಿ.ಬಿ, ಸಂಸ್ಥೆಯ ಸಲಹೆಗಾರ
ಡಾ. ಮಂಜಪ್ಪ ಸಾರಥಿ ಮತ್ತು ಸಂಯೋಜಕ ಡಾ. ಸಂತೋಷ್ ಎಂ. ನೇಜಕಾರ್ ಯೋಜನೆಯ ಯಶಸ್ವೀ ನಿರ್ವಹಣೆಗೆ ಮುಂದಾಗಿದ್ದಾರೆ.

error: Content is protected !!