ಉಳಿದ 6 ಸ್ಥಾನಕ್ಕೆ 13 ಜನ ಸ್ಫರ್ಧೆ- ಕುತೂಹಲ ಮೂಡಿಸಿದ ಸಹಕಾರಿ ಎಲೆಕ್ಷನ್
ಹರಪನಹಳ್ಳಿ, ಜ. 15 – ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ (ಪಿಕಾರ್ಡ) 14 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 6 ಸ್ಥಾನಕ್ಕೆ 13 ಜನ ಸ್ಪರ್ಧಿಸಿದ್ದು, ಜ.19 ರಂದು ಚುನಾವಣೆ ಜರುಗಲಿದೆ.
ಬ್ಯಾಂಕ್ನ ಒಟ್ಟು 14 ನಿರ್ದೇಶಕ ಸ್ಥಾನಗಳಿಗೆ 68 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಇದರಲ್ಲಿ ಕಂಚಿಕೇರಿ ಮತ್ತು ಲಕ್ಷ್ಮೀಪುರ ಕ್ಷೇತ್ರದಿಂದ ಮಾತ್ರ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದವು, ಉಳಿದ 12 ಕ್ಷೇತ್ರಕ್ಕೆ ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದವು.
ಸೋಮವಾರ ನಾಮಪತ್ರ ವಾಪಸ್ಸ್ ಪಡೆಯುವ ಪ್ರಕ್ರಿಯೆ ಜರುಗಿದ್ದು, 6 ಕ್ಷೇತ್ರಗಳಲ್ಲಿ ಒಬ್ಬರು ಹೊರತು ಪಡಿಸಿ ಉಳಿದೆಲ್ಲ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ 8 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಅವಿರೋಧ ಆಯ್ಕೆಯಾದವರು : ಹರಪನಹಳ್ಳಿ ಸಾಮಾನ್ಯ ಕ್ಷೇತ್ರ-ಪಿ.ಬಿ.ಗೌಡ, ತೆಲಿಗಿ ಸಾಮಾನ್ಯ ಕ್ಷೇತ್ರ-ಎಸ್.ಎಂ. ಚಿದಾನಂದಸ್ವಾಮಿ, ನೀಲಗುಂದ ಸಾಮಾನ್ಯ ಕ್ಷೇತ್ರ-ಬೇಲೂರು ಸಿದ್ದೇಶ್, ಕಂಚಿಕೇರಿ ಸಾಮಾನ್ಯ ಕ್ಷೇತ್ರ-ಶಾಂತಕುಮಾರ ರೆಡ್ಡಿ, ಅರಸೀಕೆರೆ ಸಾಮಾನ್ಯ ಮಹಿಳೆ ಕ್ಷೇತ್ರ-ಸೌಭಾಗ್ಯಮ್ಮ, ಉಚ್ಚಂಗಿದುರ್ಗ ಸಾಮಾನ್ಯ ಕ್ಷೇತ್ರ-ರಾಜಕುಮಾರ ಭರ್ಮಪ್ಳ, ಲಕ್ಷ್ಮೀಪುರ ಸಾಮಾನ್ಯ ಕ್ಷೇತ್ರ-ಪಿ.ಎಲ್. ಪೋಮ್ಯಾನಾಯ್ಕ್, ಸಾಲ ಪಡೆಯದೇ ಇರುವ ಸದಸ್ಯರ ಕ್ಷೇತ್ರದಿಂದ ದಾದಾಪೀರ್ ಲಾಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ನಡೆಯುವ ಕ್ಷೇತ್ರಗಳು: ಹರಪನಹಳ್ಳಿ-1 ಹಿಂದುಳಿದ ‘ಬಿ’ ವರ್ಗದಿಂದ ದೇವರಾಜ್ ಎಚ್. ಹಾಗೂ ನಾಗರಾಜ ಗೊಂಗಡಿ, ಬಾಗಳಿ ಸಾಮಾನ್ಯ ಕ್ಷೇತ್ರದಿಂದ ಗುರುಬಸವರಾಜ ಅಣಜಿ ಹಾಗೂ ಭರಮನಗೌಡ ಕೂಲಹಳ್ಳಿ, ಚಿಗಟೇರಿ ಹಿಂದುಳಿದ ‘ಅ’ ವರ್ಗದಿಂದ ಜಂಬಣ್ಣ ಹಾಗೂ ಮಂಜುನಾಥ ಚಿಗಟೇರಿ, ಮತ್ತಿಹಳ್ಳಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಸ್. ಉಮ್ಮೇಶ್ ಹಾಗೂ ಮಂಜುನಾಥ ಕಮ್ಮಾರ, ತೊಗರಿಕಟ್ಟಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಶಕುಂತಲ ತೊಗರಿಕಟ್ಟಿ ಹಾಗೂ ಸುಶಿಲಮ್ಮ ಮಹಾಜನದಹಳ್ಳಿ ಹಲುವಾಗಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕಾಶಿನಾಥ, ಮಂಜಪ್ಪ ಕುಸಂಬಿ ಮತ್ತು ರಾಘವೇಂದ್ರ ನುಪ್ನಜ್ಜಿ ಸ್ಪರ್ಧಿಸಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ಧಾರ್ ಬಿ.ವಿ. ಗಿರೀಶ್ಬಾಬು ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ಮಂಜುನಾಥ ಗೀರಜ್ಜಿ, ಸಲೀಂ, ರಂಗನಾಥ್, ಸೇರಿದಂತೆ ಇತರರು ಇದ್ದರು.