ಬೆಂಕಿ ಅನಾಹುತ ತಪ್ಪಿಸಿದ `112’ರ ಸಿಬ್ಬಂದಿಗಳು

ದಾವಣಗೆರೆ, ಜ.15- ಕಳೆದ ಮಂಗಳವಾರ ತಡರಾತ್ರಿ ದಾರಿಹೋಕರೊಬ್ಬರು ಮಾಡಿದ ಕರೆಗೆ ತಕ್ಷಣ ಸ್ಪಂದಿಸಿದ ಬಡಾವಣೆ ಪೊಲೀಸ್ ಠಾಣೆಯ 112ರ ಸಿಬ್ಬಂದಿಗಳು ಬೆಂಕಿಯಿಂದಾಗಬ ಹುದಾಗಿದ್ದ ಅನಾಹುತವೊಂದನ್ನು ತಪ್ಪಿಸಿದ್ದಾರೆ.

ನಗರದ ಹದಡಿ ರಸ್ತೆಯ ಯುಬಿಡಿಟಿ ಕಾಲೇಜ್ ಎದುರಿನ ಪಂಚ ದೇವಸ್ಥಾನದ ಪಕ್ಕದ ಕಸದ ರಾಶಿಗೆ ತಡರಾತ್ರಿ ಯಾರೋ ಬೆಂಕಿ ಹಚ್ಚಿದ್ದಾರೆ. ಅದು ದೊಡ್ಡದಾಗಿ ಉರಿಯುತ್ತಿದೆ ಎಂದು 112ಕ್ಕೆ ಕರೆ ಬಂದಿದೆ. ಈ ಕರೆಗೆ ತಕ್ಷಣ ಸ್ಪಂದಿಸಿದ ಬಡಾವಣೆ ಪೊಲೀಸ್ ಸಿಬ್ಬಂದಿಗಳಾದ ಕಾನ್‌ಸ್ಟೇಬಲ್ ಚೇತನ್ ಕುಮಾರ್ ಹಾಗೂ ದಫೇದಾರ್ ಗುಡದೇಶ್ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಆ ಬೆಂಕಿ ದೊಡ್ಡದಾಗಿ ಉರಿಯುತ್ತಾ ರೋಡ್ ಸೈಡ್‌ಗೆ ಕಟ್ಟಿದ್ದ ಕಟ್ಟಿಗೆಯ ತಡೆಗೋಡೆಗೂ ಆವರಿಸಿಕೊಂಡಿದೆ.

ಇನ್ನೇನು ಪಕ್ಕದಲ್ಲೇ ಇದ್ದ ಹುಲ್ಲಿನ ಬಣವೆಗೆ ಹಾಗೂ ವಿದ್ಯುತ್‌ನ ದೊಡ್ಡ ಟ್ರಾನ್ಸ್ ಫಾರಂಗೂ ಆವರಿಸುತಿದ್ದುದ್ದನ್ನು ಅರಿತ ಸಿಬ್ಬಂದಿಗಳು, ಅಗ್ನಿಶಾಮಕ ದಳಕ್ಕೆ ಕಾಯದೇ ತಕ್ಷಣ ಕಾರ್ಯಪ್ರವೃತ್ತರಾಗಿ ದೇವಸ್ಥಾನದ ಆವರಣದಲ್ಲಿದ್ದ ನೀರಿನ ಟ್ಯಾಂಕ್‌ನಲ್ಲಿನ ನೀರನ್ನು ಅಲ್ಲಿಯೇ ಇದ್ದ ಬಕೆಟ್‌ಗಳಲ್ಲಿ ತಂದು ಹಾಕುವುದರ ಮೂಲಕ ಬೆಂಕಿ ನಂದಿಸಿದ್ದಾರೆ. ನಂತರ ದೇವಸ್ಥಾನದವರ ಗಮನಕ್ಕೂ ತಂದಿದ್ದಾರೆ. ಆಗಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!