ದಾವಣಗೆರೆ, ಜ. 15 – ಸಿ.ಜಿ. ಆಸ್ಪತ್ರೆಯ ವಾರ್ಡ್ ಮುಂಭಾಗದಲ್ಲಿ ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ವ್ಯಕ್ತಿ ಮೊನ್ನೆ ದಿನಾಂಕ 12 ರಂದು ಮೃತಪಟ್ಟಿದ್ದಾನೆ. ಕೋಲುಮುಖ, ಕಪ್ಪು ಕೂದಲು ಇದ್ದು, ಗಡ್ಡದಲ್ಲಿ ಕಪ್ಪು ಮತ್ತು ಬಿಳಿ ಮಿಶ್ರಿತ ಕುರುಚಲು ಗಡ್ಡ ಇದೆ. ಗೋಧಿ ಮೈಬಣ್ಣ, ಬಲಗೈಯ್ಯಲ್ಲಿ ವೀರೇಶ್ ಮತ್ತು ಎಡಗೈಯಲ್ಲಿ ಸ್ವಾಮಿ ಅಂತ ಹಚ್ಚೆ ಇರುತ್ತದೆ. ಶರ್ಟ್‍ನ ಕಾಲರ್‍ನಲ್ಲಿ ರಾಹುಲ್ ಕೊಟ್ಟೂರು ಅಂತ ಲೇಬಲ್ ಇದೆ. ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಬಡಾವಣೆ ಪೆೊಲೀಸ್ ಠಾಣೆಯ ದೂ.ಸಂ: 9480803249, 08192-272012 ನ್ನು ಸಂಪರ್ಕಿಸಬಹುದು.
January 16, 2025