ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಕಾಡಜ್ಜಿಯಿಂದ 1 ಕ್ವಿಂಟಾಲ್ ಅಕ್ಕಿ ವಿತರಣೆ

ದಾವಣಗೆರೆ, ಜ.14- ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಾಳೆ ದಿನಾಂಕ 15 ರಿಂದ ಜರುಗಲಿರುವ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025 ಮತ್ತು ವಚನ ಗ್ರಂಥ ಮಹಾರಥೋತ್ಸವ  ಸಮಾರಂಭಕ್ಕೆ ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದಿಂದ 1 ಕ್ವಿಂಟಾಲ್ ಅಕ್ಕಿ ಮತ್ತು 10 ಸಾವಿರ ರೂ.ಗಳನ್ನು ಗ್ರಾಮಸ್ಥರು ಕಳುಹಿಸಿಕೊಟ್ಟರು.

ಗ್ರಾಮದ ಗಂಗಾಮತ ಸಮಾಜದ ಮುಖಂಡರಾದ ಪ್ರಕಾಶ್, ಅಂಗಜಾಲಿಯರ ತಿಪ್ಪಣ್ಣ, ವರ್ಸಪ್ಪರ ಹನುಮಂತಪ್ಪ, ಅಂಗಜಾಲಿಯರ ಪರಶುರಾಮ, ರಾಜಪ್ಪ, ಅಂಗಜಾಲಿಯರ ಮರಿಯಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!