ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಇಂದು ಬೆಳಿಗ್ಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 5.45ಕ್ಕೆ ಓಂಕಾರ, 5.50ಕ್ಕೆ ಸೂರ್ಯ ನಮಸ್ಕಾರ (108 ಬಾರಿ), ಬೆಳಿಗ್ಗೆ 7.15ಕ್ಕೆ ಸಭಾ ಕಾರ್ಯಕ್ರಮ ಏರ್ಪಾಡಾಗಿದ್ದು, ದಿವ್ಯ ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಕಲ್ಪ ಸೇವಾ ಫೌಂಡೇಷನ್ ಜಿ. ಮಹಾಂತೇಶ ವಹಿಸಲಿದ್ದಾರೆ.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯ ಎ. ನಾಗರಾಜ್, ಸಮಾಜ ಸೇವಕ ಕಣಕುಪ್ಪಿ ಮುರುಗೇಶಪ್ಪ, ಯೋಗ ಶಿಕ್ಷಕ ಕೆ. ಕರಿಬಸಪ್ಪ, ಮಾಜಿ ಮೇಯರ್ ಗೋಣೆಪ್ಪ, ಮಹಾನಗರ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಉತ್ತಂಗಿನ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಲಸಿದ್ದಾರೆ.
ಸುರೇಶ್ ಎಲ್.ಬಿ. ಶಿವಪುತ್ರಪ್ಪ, ದುಗ್ಗೇಶ್, ಕಿರಣ್‌ಕುಮಾರ್, ಶ್ರೀಕಾಂತ ಮತ್ತು ಸಂಕಲ್ಪ ಯೋಗ ಶಾಲೆಯ ಸದಸ್ಯರು ಉಪಸ್ಥಿತರಿರುವರು.