ಶ್ರೀ ಭದ್ರಕಾಳಿ ಸಮೇತ ವೀರ ಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಸಂಕ್ರಾಂತಿಯ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಬೆಳಿಗ್ಗೆ 8 ರಿಂದ 10.30 ರವರೆಗೆ ಆದಿತ್ಯ ಸೂರ್ಯನಾರಾ ಯಣ ಹೋಮ ಪೂರ್ಣಾವತಿ ನಡೆಯಲಿದೆ. ಬೆಳಿಗ್ಗೆ 11 ರಿಂದ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಶಿಷ್ಯರಿಂದ ಸತ್ಸಂಗ ಇರುತ್ತದೆ. ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ ವಿಶೇಷ ಪ್ರಸಾದಗಳ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಆರೋಗ್ಯ ಮೇಳ : ವೀರ ಭದ್ರೇಶ್ವರ ದೇವಸ್ಥಾನದ ಆವರಣ ದಲ್ಲಿ ಮಲೇಬೆನ್ನೂರು ಲಯನ್ಸ್ ಕ್ಲಬ್ನಿಂದ ವಿವಿಧ ಸೇವಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ.
ಶ್ರೀ ವೀರಭದ್ರೇಶ್ವರ ಚಾರಿಟೇ ಬಲ್ ಟ್ರಸ್ಟ್ ಹಾಗೂ ಕಡ್ಲಿ ಐವಿಎಫ್ ಸೆಂಟರ್ (ದಾವಣಗೆರೆ) ಮತ್ತು ಕೃಷ್ಣ ಹೆಲ್ತ್ಕೇರ್, ಡಯಾಗ್ನೋಸ್ಟಿಕ್ ಸೆಂಟರ್ ಇವರ ಸಂಯುಕ್ತಾಶ್ರಯ ದಲ್ಲಿ ಆರೋಗ್ಯ ಮೇಳ, ರಕ್ತದಾನ ಶಿಬಿರ ಮತ್ತು ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರ ಗಳನ್ನು ಇಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಏರ್ಪಡಿಸಲಾಗಿದೆ.