ಎಕ್ಕೆಗೊಂದಿ : ಇಂದು ಆರೋಗ್ಯ ಶಿಬಿರ, ಸಿದ್ಧರಾಮೇಶ್ವರ ಉತ್ಸವ

ಮಲೇಬೆನ್ನೂರು ಸಮೀಪದ ಎಕ್ಕೆಗೊಂದಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಗುರು ಸಿದ್ಧರಾಮೇಶ್ವರರ ಜಯಂತ್ಯೋತ್ಸವದ ಅಂಗವಾಗಿ ಶ್ರೀ ನಂದಿ ಸೌಹಾರ್ದ ಸಹಕಾರಿ ಸಂಘ (ಮಲೇಬೆನ್ನೂರು) ಮತ್ತು ಎಸ್.ಎಸ್.ಕೇರ್ ಟ್ರಸ್ಟ್ (ದಾವಣಗೆರೆ) ಇವರುಗಳ ಆಶ್ರಯದಲ್ಲಿ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 6 ಗಂಟೆಯಿಂದ ಗ್ರಾಮದಲ್ಲಿ ಶ್ರೀ ಗುರುಸಿದ್ಧರಾಮೇಶ್ವರರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಎಸ್.ರಾಮಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಚಂದ್ರಶೇಖರ್ ಪೂಜಾರ್, ನಂದಿಗಾವಿ ಶ್ರೀನಿವಾಸ್ ಭಾಗವಹಿಸಲಿದ್ದಾರೆ.

error: Content is protected !!