ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಹರಾಜು

ದಾವಣಗೆರೆ, ಜ. 13- ದೇವನಗರಿ ಕ್ರೀಡಾ ಸಮಿತಿ, ಎಸ್‌.ಎಸ್. ಮಲ್ಲಿಕಾರ್ಜುನ್, ಮಣಿ ಸರ್ಕಾರ್ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 14, 15 ಹಾಗೂ 16 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡನೇ ಬಾರಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್ ಲೀಗ್-2025 ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಶ್ರೀರಾಮ ಸೇನೆಯ ಉತ್ತರ ವಲಯದ ಅಧ್ಯಕ್ಷ ಮಧು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪಂದ್ಯಾವಳಿಯಲ್ಲಿ  12 ಆಟಗಾರರಂತೆ ಒಟ್ಟು 8 ತಂಡಗಳಿಗೆ ಹರಾಜು ಪ್ರಕ್ರಿಯೆ ಇದೇ ದಿನಾಂಕ 19 ರಂದು ಬೆಳಿಗ್ಗೆ 10 ಗಂಟೆಗೆ ಬಾಪೂಜಿ ಸ್ಟೇಡಿಯಂ, ಒಳಾಂಗಣ ಕ್ರೀಡಾಂಗಣದಲ್ಲಿ ನದೆಯಲಿದೆ ಎಂದರು.

ತಂಡವನ್ನು ಖರೀದಿ ಮಾಡಲು ಆಸಕ್ತರು 7795698454, 9535828483 ಗೆ ಸಂಪರ್ಕಿಸಬಹುದು. 

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಪದಾಧಿಕಾರಿಗಳಾದ ಪರಶು ರಾಮ್, ಸುನೀಲ್ ಖಲಂದರ್, ಪ್ರದೀಪ, ಎಸ್.ಸುನೀಲ್ ಉಪಸ್ಥಿತರಿದ್ದರು. 

error: Content is protected !!