ದಾವಣಗೆರೆ, ಜ. 12- ದಾವಣಗೆರೆ ವಿಶ್ವವಿದ್ಯಾನಿಲಯದ 2022-24 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ನಡೆದ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಎಸ್.ಎ. ಕಾವ್ಯ ಸಿಜಿಪಿಎ 8.92, ಐಶ್ವರ್ಯ ಸಿಜಿಪಿಎ 8.80, ಕಾವ್ಯ ಬಸವನಗೌಡ ಪಾಟೀಲ್ ಸಿಜಿಪಿಎ 8.80 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪ್ರಾಚಾರ್ಯ ಡಾ.ಕೆ.ಟಿ. ನಾಗರಾಜನಾಯ್ಕ ಅಭಿನಂದಿಸಿದ್ದಾರೆ.
January 13, 2025