ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ 285ನೇ ಬನದ ಹುಣ್ಣಿಮೆ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀ ಕಲ್ಲಯ್ಯಜ್ಜ ವಹಿಸುವರು. ಶಾಸಕ ಶಾಮನೂರು ಶಿವಶಂಕರಪ್ಪ, ಡಾ. ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಶಿಕಲಾ ಮೂರ್ತಿ, ಎಸ್.ಕೆ. ವೀರಣ್ಣ, ಡಾ. ಜೆ.ಎನ್. ಕರಿಬಸಪ್ಪ ಉಪಸ್ಥಿತರಿರುವರು. ಗಣೇಶ್ ಹುಲಗೂರು, ಸುರೇಶ ಕೊಪ್ಪಳ, ಭಾಗ್ಯವಂತ, ಆದಿತ್ಯ ಚಗಿಳಿ, ಭುವನ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
January 13, 2025